ಕಾವ್ಯಯಾನ

ನಿನ್ನ ನೆನಪಿನ ಮೀನು..! ಡಾ.ಜಯಪ್ಪ ಹೊನ್ನಾಳಿ(ಜಯಕವಿ) ನಿನ್ನ ನೆನಪಿನ ಮೀನು ಎಷ್ಟೊಂದು ಬಣ್ಣದಲಿ ಆಡುತಿವೆ ಎದೆಗೊಳದ ತಿಳಿಯಾಳದಲ್ಲಿ..! ಕನಸ ರೆಪ್ಪೆಯ ತೆರೆದು ಕನವರಿಕೆಯಲೆ ನೆರೆದು ಮಳೆಬಿಲ್ಲ ಮಿಂದಂತೆ ಮಧು ಮೇಳದಲ್ಲಿ..! ಹೊಸಿಲ ಚುಂಬಿಸುತಿಹುದು ಹೊಂಬಿಸಿಲಿನೊಡಗೂಡಿ ಹೊಸತೊಂದು ಹಾರೈಕೆ ಹಳೆ ನೋವ ಕೊಂದು..! ನಗುವ ನಂದನದೊಲವು ತಂಗಾಳಿ ತೊಟ್ಟಿಲಲಿ ಪರಿಮಳದಿ ತಾ ತುಂಬಿ ನವ ಭಾವ ತಂದು..! ಬಣಗುಡುವ ಬದುಕಲ್ಲಿ ನೀ ಬಂದು ನಕ್ಕಂದು ಮರಳಿ ಬಂದಿತು ಮನಕೆ ಮತ್ತೆ ಮಲೆನಾಡು..! ಜೀವವಾಯಿತು ಜಿಂಕೆ ರೆಕ್ಕೆ ಬಿಚ್ಚಿತು ನವಿಲು … Continue reading ಕಾವ್ಯಯಾನ